ABC

Thursday, 7 March 2019

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿಸರ್ಕಾರ ವೈರಮುಡಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಬದ್ಧವಾಗಿದೆ.

ಮೇಲುಕೋಟೆ: ಮಾರ್ಚ 17 ರಂದು ನಡೆಯುವ ಚೆಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಉತ್ಸವ ಹಲವು ಹೊಸತನಕ್ಕೆ ನಾಂದಿಯಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಕಾಳಜಿಯಿಂದ ಭಕ್ತರಿಗೆ ವಿಶೇಷ ದರ್ಶನ ಲಭಿಸಲಿದೆ.ತಿರುಮಲೆಗೆ ಸಮಾನಕ್ಷೇತ್ರವಾದ ಮೇಲುಕೋಟೆಯ ಚೆಲುವನಾರಾಯಣಸ್ವಾಮಿದೇವಾಲಯ, ಯೋಗನರಸಿಂಹಸ್ವಾಮಿ ಬೆಟ್ಟ ಕಲ್ಯಾಣಿ ರಾಜಬೀದಿ, ಉತ್ಸವ ಬೀದಿ ವೈವಿಧ್ಯಯಮಯ ದೀಪಾಲಂಕಾರದಲ್ಲಿ ಕಂಗೊಳಿಸಲಿದೆ. ದೀಪಾಲಂಕಾರ ಮತ್ತು ದ್ವನಿಬೆಳಕಿನ ವ್ಯವಸ್ಥೆತೆಯನ್ನು 35ಲಕ್ಷ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನೆರವೇರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು ತಿಳಿಸಿದರು.
ವೈರಮುಡಿ ಬ್ರಹ್ಮೋತ್ಸವ ಪೂರ್ವಸಿದ್ಧತೆಯ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು. ವೈರಮುಡಿ ಉತ್ಸವ ಈ ಸಲ ಭಾನುವಾರ ನಡೆಯುತ್ತಿರುವ ಕಾರಣ ಕಳೆದಸಲಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿಸರ್ಕಾರ ವೈರಮುಡಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಬದ್ಧವಾಗಿದೆ.ಉತ್ತಮ ರೀತಿಯ ವೈದ್ಯಕೀಯ ವ್ಯವಸ್ಥೆ, 24 ಗಂಟೆ ನಿರಂತರ ವಿದ್ಯುತ್ ಪೂರೈಕೆ ಹೆಚ್ಚಿನ ಪೊಲೀಸ್ ಭದ್ರತೆ, ನಿರಂತರ ಕುಡಿಯುವ ನೀರು, ಸ್ವಚ್ಛತಾ ಕಾರ್ಯ, ಸಿ.ಸಿ ಟಿ.ವಿಗಳ ಕಣ್ಗಾವಲಿನ ವ್ಯವಸ್ಥೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದು ನಿಂತು ಮಾಡಬೇಕೆಂದು ಸೂಚಿಸಿದ ಸಚಿವರು ಮಂಡ್ಯ ಜಿಲ್ಲಾಕಾರಿಗಳು ಪೂರ್ವಭಾವಿ ಸಭೆ ನಡೆಸಿ ವಿವಿಧ ಇಲಾಖೆಗಳಿಗೆ ವಹಿಸಿರುವ ಕೆಲಸವನ್ನು ಪ್ರತಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ನಿರ್ವಹಿಸಿ ಜಾತ್ರಾ ಮಹೋತ್ಸವವನ್ನು ಅಚ್ಚುಟ್ಟಾಗಿ ನಿರ್ವಹಿಸಬೇಕು ಎಂದರು.

ಹೆಚ್ಚಿನ ಬಸ್: ಮಂಡ್ಯ ರಾಜ್ಯರಸ್ತೆ ಸಾರಿಗೆ ಬಸ್ ಘಟಕದಿಂದ ವೈರಮುಡಿ ಉತ್ಸವಕ್ಕಾಗಿ 100 ವಿಶೇಷ ಬಸ್‍ಗಳು ನಿಯೋಜಿಸಬೇಕು, ಬೆಂಗಳೂರು, ಮೈಸೂರು ನಗರಗಳಿಂದ ವೋಲ್ವೋ ಮತ್ತು ರಾಜಹಂಸ ಬಸ್, ತಮಿಳುನಾಡು ಮತ್ತು ಆಂಧ್ರಪ್ರದೇಶ ಮುಂತಾದ ಹೊರರಾಜ್ಯಗಳ ಭಕ್ತರು ವೈರಮುಡಿಗೆ ಬರುವ ಕಾರಣ ಮಂಡ್ಯ ಮತ್ತು ಪಾಂಡವಪುರ ರೈಲ್ವೆ ನಿಲ್ದಾಣದಿಂದ ಬಸ್ ಸೌಕರ್ಯ ಕಲ್ಪಿಸುವಂತೆ ಸೂಚಿಸಲಾಯಿತು.ವೈರಮುಡಿ ಜಾತ್ರಾ ಮಹೋತ್ಸವಕ್ಕಾಗಿ 10 ಲಕ್ಷರೂ ಅನುದಾನವನ್ನು ಬಿಡುಗಡೆಮಾಡುವಂತೆಯೂ ಸಚಿವರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.  35ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ : ಗೌರಿಕಟ್ಟೆ- ಕಣಿವೆ ಬಳಿಯಿಂದ ಮೇಲುಕೋಟೆಗೆ ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ನಿರ್ಮಾಣ ಮಾಡುವ ಜೊತೆಗೆ ಇಲ್ಲಿನ ಎಲ್ಲಾ ರಸ್ತೆಗಳನ್ನು 35 ಕೋಟಿ ರೂ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡುವ ಕಾಮಗಾರಿಗೆ ಸಚಿವ ಸಿ.ಎಸ್.ಪುಟ್ಟರಾಜು ಭೂಮಿ ಪೂಜೆ ನೆರವೇರಿಸಿದರು.

ವೈರಮುಡಿ ಉತ್ಸವ: ಲಕ್ಷಾಂತರ ಭಕ್ತರು ಯಾವುದೇ ನಿರಾಸೆಯಿಲ್ಲದೆ ಚೆಲುವನಾರಾಯಣನ ವೈರಮುಡಿ ಉತ್ಸವವನ್ನು ದರ್ಶನ ಮಾಡಲು ಅನುಕೂಲವಾಗಲು ವೈರಮುಡಿ ಉತ್ಸವ ಪಾರ್ಕಾವಣೆ ಮತ್ತು ದೇವಾಲಯದಲ್ಲಿ ನಡೆಯುವ ಪೂಜಾಕೈಂಕರ್ಯಗಳನ್ನು ಭಕ್ತರೂ ವೀಕ್ಷಿಸುವ ಸಲುವಾಗಿ ಹೆಚ್ಚಿನ ಬೃಹತ್ ಪರದೆಗಳನ್ನು ಉತ್ಸವ ಬೀದಿಗಳಲ್ಲಿ ಅಳವಡಿಸಬೇಕು. ಜಾತ್ರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳಾದ ರಥೋತ್ಸವ, ತೆಪ್ರೋ ತೀರ್ಥಸ್ನಾನ ಸೇರಿದಂತೆ ಹತ್ತೂದಿನಗಳ ಕಾಲನಡೆಯುವ ಎಲ್ಲಾ ಉತ್ಸವಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಮಂಡ್ಯ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಾಲಕ್ಕೀಗೌಡ, ಪಾಂಡವಪುರ ಉಪವಿಭಾಗಾಕಾರಿ ಶೈಲಜಾ, ತಹಶೀಲ್ದಾರ್ ಪಾಟೀಲ್, ಜಿ.ಪಂ ಸದಸ್ಯ ತ್ಯಾಗರಾಜು, ಮೇಲುಕೋಟೆ ಗ್ರಾ.ಪಂ ಅಧ್ಯಕ್ಷ ಅವ್ವಗಂಗಾಧರ್, ತಾ.ಪಂ ಅಧ್ಯಕ್ಷೆ ಸುಮಲತಾ ಉಪಸ್ಥಿತರಿದ್ದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...