ABC

Wednesday, 6 February 2019

ಬಾಲಬಿಚ್ಚಿದ ದಂತಚೋರರು... ಆ್ಯಸಿಡ್​ ಬಳಸಿ ಆನೆ ದಂತ ಕಿತ್ತ ಖದೀಮರು

ಚಾಮರಾಜನಗರ: ಒಂಟಿ ಸಲಗವನ್ನು ನಾಡಬಂದೂಕಿನಿಂದ ಕೊಂದು ದಂತ ಹೊತ್ತೊಯ್ದಿರುವ ಘಟನೆ ಕಾವೇರಿ ವನ್ಯಜೀವಿಧಾಮದ ಕೊತ್ತನೂರು ಅರಣ್ಯ ವಲಯದಲ್ಲಿ ನಡೆದಿದೆ.

ಹಣೆಗೆ ಗುಂಡಿಕ್ಕಿ ಆ್ಯಸಿಡ್ ಮೂಲಕ ಮಾಂಸಖಂಡವನ್ನು ಸುಟ್ಟು ದಂತ ಕದ್ದು ಪರಾರಿಯಾಗಿರುವ ಘಟನೆ 8-9 ದಿನಗಳ ಬಳಿಕ ಬೆಳಕಿಗೆ ಬಂದಿದೆ.

ಈ ಕುರಿತು ಎಸಿಎಫ್ ಅಂಕರಾಜು ಅವರು 'ಈಟಿವಿ ಭಾರತ'ದೊಂದಿಗೆ ಮಾತನಾಡಿ,‌ ದಂತಚೋರರು ವೃತ್ತಿಪರ ಬೇಟೆಗಾರರಾಗಿದ್ದು, ಹಣೆಗೆ ಗುಂಡಿಕ್ಕಿದ್ದಾರೆ. ಈ ಹಿಂದೆ ಕೊಡಲಿ, ಪಿಕಾಸಿ ಮೂಲಕ ದಂತ ಕೀಳುತ್ತಿದ್ದರು. ಆದರೆ ಇವರು ಆ್ಯಸಿಡ್ ಮೂಲಕ ಮಾಂಸಖಂಡಗಳನ್ನು ಸುಟ್ಟು ದಂತ ಕಿತ್ತಿದ್ದಾರೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ನಾಡ ಬಂದೂಕು ಉಪಯೋಗಿಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ 10-12 ವರ್ಷಗಳಿಂದ ಮರೆಯಾಗಿದ್ದ ದಂತಚೋರರು ಮತ್ತೆ ವೃತ್ತಿ ಆರಂಭಿಸಿರುವುದು ಪರಿಸರಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...